
- This event has passed.
ದೈವದ ತಂಬಿಲ
ಜುಲೈ 7, 2024
➡️ ಸಂಜೆ: ದೈವದ ತಂಬಿಲ
➡️ ರಾತ್ರಿ: ಗುರುಹಿರಿಯರಿಗೆ ಆಗೇಲು, 2 ಕಲ್ಲುರ್ಟಿಗೆ ಆಗೇಲು
➡️ ಉಟದ ವ್ಯವಸ್ಥೆ: ಪೂರ್ಣ ವ್ಯವಸ್ಥೆ ಮಾಡಲಾಗಿದೆ.
ದೈವದ ಅನುಗ್ರಹ ಮತ್ತು ಆಶೀರ್ವಾದದಿಂದ ಇಂದು ನಡೆದ ದೈವಗಳ ತಂಬಿಲ, ಗುರುಹಿರಿಯರ ಆಗೇಲು ಮತ್ತು 2 ಕಲ್ಲುರ್ಟಿ ಆಗೇಲು ಸಂಪನ್ನಗೊಂಡಿತು. ನಾವು ಮಾಡುತ್ತಿರುವ ಜೀರ್ಣೋದ್ದಾರ ಕಾರ್ಯ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ ಎಂಬುದನ್ನು 5 ಕೋಳಿಗಳು ಪೂರ್ವ – ಪಶ್ಚಿಮಕ್ಕೆ ಬೀಳುವುದರ ಮೂಲಕ ಸ್ಪಷ್ಟಪಡಿಸಿದೆ.
ಇದು ನಮ್ಮ ಎಲ್ಲರಿಗು ದೈವದ ಹಿತಚಿಂತನೆಯ ಸಂಕೇತ.
ದೈವದ ಅನುಗ್ರಹದಿಂದ 15 ಮನೆಯಿಂದ ಒಟ್ಟು 35 ಜನರು ಈ ಪವಿತ್ರ ಕಾರ್ಯಕ್ಕೆ ಭಾಗವಹಿಸಿರುವುದು ಸಂತೋಷದ ವಿಚಾರ. ಕುಟುಂಬದ ಎಲ್ಲರೂ ಒಗ್ಗೂಡಿ ದೈವ ಸೇವೆಗೆ ಬಂದಿರುವುದು, ಭಕ್ತಿಯ ಸಂಕೇತ ಮತ್ತು ಒಗ್ಗಟ್ಟಿನ ಚಿಹ್ನೆ.
ನಮ್ಮ ಕುಟುಂಬ ಸದಾ ಶ್ರಿಯುತವಾಗಿರಲಿ, ದೈವದ ಕೃಪೆ ತೃಪ್ತಿಯಾಗಿ ಲಭಿಸಲಿ. 🙏🏻🙏🏻ದೈವದ ಆಶೀರ್ವಾದ ಸದಾ ನಮ್ಮೊಂದಿಗೆ ಇರಲಿ. 🙏🏻🙏🏻
ಹೆಚ್ಚಿನ ವಿವರಗಳಿಗಾಗಿ WhatsApp ಅಥವಾ +91 99001 06608 ಗೆ ಕರೆ ಮಾಡಿ